Spread the love

ಸಂಯುಕ್ತ ಟೈಮ್ಸ್, ಬೆಳಗಾವಿ: ಟಿಕೆಟ್ ಕೇಳಿದಾಗ ಮುಸುಕುಧಾರಿಯೊಬ್ಬ ಐವರಿಗೆ ಚಾಕುವಿನಿಂದ ಇರಿದು ಪರಾರಿಯಾದ ಘಟನೆ ಪಾಂಡಿಚೇರಿ-ಮುಂಬೈ ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ.

ಘಟನೆಯಲ್ಲಿ ಝಾನ್ಸಿ ಮೂಲದ ಟ್ರೇನ್ ಅಟೆಂಡರ್ ದೇವಋಷಿ ವರ್ಮಾ (23) ಸಾವನ್ನಪ್ಪಿದ್ದು, ನಾಲ್ವರು ತೀವ್ರ ಗಾಯಗೊಂಡಿದ್ದಾರೆ. ಬೆಳಗಾವಿಯ ಖಾನಾಪುರ ತಾಲೂಕಿನ ಲೊಂಡಾ ಬಳಿ ಘಟನೆ ನಡೆದಿದ್ದು, ಟಿಕೆಟ್ ಕೇಳಿದಾಗ ಚೂರಿ ಇರಿದು ಆಗಂತುಕ ಪರಾರಿಯಾಗಿದ್ದಾನೆ. ನಾಲ್ವರು ಪ್ರಯಾಣಿಕರು ಸೇರಿ ಟಿಸಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅಪರಿಚಿತ ಮುಸುಕುಧಾರಿಯಿಂದ ಕೃತ್ಯ ನಡೆದಿದೆ.

ಕೃತ್ಯ ಎಸಗಿ ಅಪರಿಚಿತ ಮುಸುಕುಧಾರಿ ಪರಾರಿಯಾಗಿದ್ದು, ಟಿ.ಸಿ ಸೇರಿ ನಾಲ್ವರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಾಲುಕ್ಯ ರೈಲು ಧಾರವಾಡದಿಂದ ಬೆಳಗಾವಿಯತ್ತ ಬರುತ್ತಿದ್ದ ವೇಳೆ ಘಟನೆ ನಡೆದಿದೆ. ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Leave a Reply

Your email address will not be published. Required fields are marked *

You missed

error: Content is protected !!