Spread the love

ಸಂಯುಕ್ತ ಟೈಮ್ಸ್, ಗೋಕಾಕ: ಸಿಡಿಮದ್ದು ತಯಾರಿಸುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಸ್ಪೋಟಗೊಂಡ ಪರಿಣಾಮ ವ್ಯಕ್ತಿಯೋರ್ವ ಬೆಂಕಿಯಲ್ಲಿ ಸಜೀವ ದಹನವಾಗಿರುವ ಘಟನೆ ಪಾಮಲದಿನ್ನಿ‌ ಗ್ರಾಮದಲ್ಲಿ ನಡೆದಿದೆ.

ಜಿಲ್ಲೆಯ ಗೋಕಾಕ ತಾಲೂಕಿನ ಪಾಮಲದಿನ್ನಿ‌ ಗ್ರಾಮದಲ್ಲಿ ನಡೆದ ಸ್ಪೋಟದಲ್ಲಿ ಮಲ್ಲಪ್ಪ ಸತ್ಯಪ್ಪ ಕಂಕಣವಾಡಿ (38 ) ಮೃತಪಟ್ಟಿದ್ದಾರೆ. ಪಂಚಮಿ ಹಬ್ಬಕ್ಕೆ ಸಿಡಿಮದ್ದು ಹಾರಿಸಲುವ ಉದ್ದೇಶದಿಂದ ಮದ್ದು ತಯಾರಿಸುತ್ತಿದ್ದ ಸಂದರ್ಭದಲ್ಲಿ ಸ್ಪೋಟ ಸಂಭವಿಸಿದೆ.

ಸಿಡಿಮದ್ದು ಇದ್ದಕ್ಕಿದ್ದಂತೆ ಸ್ಪೋಟಗೊಂಡ ಪರಿಣಾಮ ಮಲ್ಲಪ್ಪ ಸತ್ಯಪ್ಪ ಕಂಕಣವಾಡಿ ಸುಟ್ಟು ಕರಕಲಾಗಿದ್ದಾನೆ. ಸ್ಪೋಟದ ರಭಸಕ್ಕೆ ತಗಡಿನ ಮನೆ ಸುಟ್ಟು ಹೋಗಿದೆ. ಸ್ಥಳಕ್ಕೆ ಘಟಪ್ರಭಾ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Leave a Reply

Your email address will not be published. Required fields are marked *

You missed

error: Content is protected !!