Spread the love

ಸಂಯುಕ್ತ ಟೈಮ್ಸ್, ಹಾವೇರಿ: ಬ್ಯಾಡಗಿಯಲ್ಲಿ ನೈತಿಕ ಪೊಲೀಸ್ ಗಿರಿ ಹಾಗೂ ಗ್ಯಾಂಗ್ ರೇಪ್ ಪ್ರಕರಣ ಮುನ್ನೆಲೆಯಲ್ಲಿರುವಾಗಲೇ ಬ್ಯಾಡಗಿ ಪಟ್ಟಣದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ನಡೆದಿದೆ‌.

Grunge red arrested word round rubber seal stamp on white background

ಹಿಂದೂ ವ್ಯಕ್ತಿಯೊಬ್ಬನ ಜೊತೆ ಕಾಣಿಸಿಕೊಂಡಿದ್ದರು ಎಂಬ ಕಾರಣಕ್ಕೆ ಮುಸ್ಲಿಂ ಯುವತಿಯ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದೆ. ಹಲ್ಲೆಗೊಳಗಾದ ಮುಸ್ಲಿಂ ಯುವತಿ ಬ್ಯಾಡಗಿ ತಾಲೂಕು ಅಗಸನಹಳ್ಳಿ ಗ್ರಾಮದಲ್ಲಿರುವ ಸಂಬಂಧಿಕರ ಮನೆಗೆ ಹೊರಟಿದ್ದರು. ತಮ್ಮ ಜೊತೆ ಕೆಲಸ ಮಾಡ್ತಿದ್ದ ಜಗದೀಶ್ ಎಂಬ ವ್ಯಕ್ತಿ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಘಟನೆ ನಡೆದಿದೆ.

ಬ್ಯಾಡಗಿ ಪಟ್ಟಣದ ಪುರಸಭೆಯ ಬಳಿಯ ಶಿವನ ದೇವಸ್ಥಾನದ ಬಳಿ ಮುಸ್ಲಿಂ ಯುವಕರ ಗುಂಪು ಹಲ್ಲೆ ಮಾಡಿದೆ. ನೀನು ಯಾಕೆ ಇವನ ಜೊತೆ ಬೈಕ್ ನಲ್ಲಿ ಬಂದೆ? ಎಂದು ಪ್ರಶ್ನಿಸಿ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ‌. ಯುವತಿಯನ್ನ ಎಳೆದಾಡಿ ಕಪಾಳಕ್ಕೆ ಹೊಡೆದು ಸಾರ್ವಜನಿಕ ಸ್ಥಳದಲ್ಲಿ ಅವಮಾನ ಮಾಡಿದ್ದಾರೆ. ಜೀವ ಬೆದರಿಕೆಯನ್ನೂ ಹಾಕಿದ್ದಾರೆಂದು ಆಕೆ ಪ್ರಕರಣ ದಾಖಲಿಸಿದ್ದಾರೆ. 

ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ 9 ಮಂದಿ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ, 7 ಜನ ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನ ಅಬ್ದುಲ್ ಖಾದರ್ ಮುದಗಲ್, ಮನ್ಸೂರ್ ತಾಂಡೂರು, ಮೆಹಬೂಬಖಾನ್ ಬಡಿಗೇರ, ರೀಯಾಜ್,ಅಲ್ಪಾಜ್ ಬಳಿಗಾರ, ಅಬ್ದುಲ್ ದೇಸೂರ, ಖಾದರ್ ಕಣಕೆ, ಸಲೀಂ ಸಾಬ್ ಖಾಜಿ, ಮಹಬೂಬ್ ಅಲಿ ಹಲಗೇರಿ ಆರೋಪಿಗಳು ಎಂದು ಗುರುತಿಸಲಾಗಿದೆ. ಡಿವೈಎಸ್ಪಿ ಪಾಟೀಲ ನೇತೃತ್ವದಲ್ಲಿ ತನಿಖೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!