Spread the love

ಸಂಯುಕ್ತ ಟೈಮ್ಸ್, ಮಂಡ್ಯ: ಇಡೀ ರಾಜ್ಯಾದ್ಯಂತ ಭಾರಿ ಸದ್ದು ಮಾಡಿದ್ದ ಮಂಡ್ಯದ ನಾಗಮಂಗಲ ಗಲಭೆ ಪ್ರಕರಣಕ್ಕೆ ಈಗ ಮೆಗಾ ಟ್ವಿಸ್ಟ್‌ ಸಿಕ್ಕಿದೆ. ಗಲಭೆ ಬಗ್ಗೆ ದೂರು ನೀಡಿದ್ದ ಪೊಲೀಸ್‌ ಅಧಿಕಾರಿಯನ್ನೇ ಅಮಾನತುಗೊಳಿಸಲಾಗಿದೆ.

ನಾಗಮಂಗಲ ಕೋಮುಗಲಭೆಗೆ ಬಳಿಕ ದೂರು ನೀಡಿದ್ದ ಇಲ್ಲಿನ ಟೌನ್ ಠಾಣೆಯ PSI ಬಿ.ಜೆ.ರವಿ ಅವರನ್ನು ಅಮಾನತು ಮಾಡಿ ಮಂಡ್ಯ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಆದೇಶಿಸಿದ್ದಾರೆ.

ಗಣೇಶ ವಿಸರ್ಜನೆ ಮಾಡುತ್ತಿದ್ದವರ ಪ್ರಚೋದನೆಯಿಂದ ಗಲಭೆ ಸೃಷ್ಟಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದ್ದಾರೆಂದು PSI ರವಿ ಅವರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ PSI ಜೊತೆಗೆ ಠಾಣೆಗೆ ಗುಪ್ತ ಮಾಹಿತಿ ಸಂಗ್ರಹ ಪೇದೆ ರಮೇಶ್ ಅವರನ್ನೂ ಅಮಾನತು ಮಾಡಲಾಗಿದೆ. ಕೋಮು ಗಲಭೆ ಪ್ರಕರಣದಲ್ಲಿ ಒಟ್ಟು ನಾಲ್ವರು ಅಧಿಕಾರಿಗಳ ತಲೆತಂಡವಾಗಿದೆ. DySP ಸುಮಿತ್, PI ಅಶೋಕ್ ಅವರನ್ನು ಈ ಮೊದಲೇ ಅಮಾನತುಗೊಳಿಸಲಾಗಿತ್ತು. 

Leave a Reply

Your email address will not be published. Required fields are marked *

You missed

error: Content is protected !!