Spread the love

ಸಂಯುಕ್ತ ಟೈಮ್ಸ್, ಗೋಕಾಕ: ಪತ್ರಕರ್ತ ಬಸವಣ್ಣಿ ತಿಗಡಿ ಅವರ ಜೊತೆಗೆ ಅನುಚಿತವಾಗಿ ವರ್ತಿಸಿದ ಗೋಕಾಕ ಕಂದಾಯ ನಿರೀಕ್ಷಕ ಶಿವಾನಂದ ಹಿರೇಮಠ ಅವರ ಮೇಲೆ ಶಿಸ್ತು ಕ್ರಮ ಜರುಗಿಸಲು ಕರ್ನಾಟಕ ಪತ್ರಕರ್ತರ ಸಂಘದ ಗೋಕಾಕ ತಾಲೂಕು ಘಟಕ ತಹಶೀಲ್ದಾರ ಡಾ: ಮೋಹನ ಭಸ್ಮೆ ಅವರನ್ನು ಆಗ್ರಹಿಸಿದೆ.

ದಿನಾಂಕ  29-02-2024 ರಂದು ಗೋಕಾಕ ತಹಶೀಲ್ದಾರ ಕಾರ್ಯಲಯಕ್ಕೆ ಭೇಟಿ ನೀಡಿದ ಕರ್ನಾಟಕ ಪತ್ರಕರ್ತರ ಸಂಘ ಕಾರ್ಯನಿಮಿತ್ಯ ಕಂದಾಯ ನಿರೀಕ್ಷಕರ ಕಾರ್ಯಾಲಯಕ್ಕೆ ಹೋಗಿದ್ದ ಪತ್ರಕರ್ತ ಬಸವಣ್ಣಿ ತಿಗಡಿ ಅವರ ಜೊತೆಗೆ ಅನುಚಿತವಾಗಿ ವರ್ತಿಸಿ, ಅಶ್ಲೀಲವಾಗಿ ನಿಂದಿಸಿದ್ದಲ್ಲದೆ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಕರ್ನಾಟಕ ಪತ್ರಕರ್ತರ ಸಂಘದ ಮನವಿಯಲ್ಲಿ ತಿಳಿಸಿದ್ದು ಶಿಸ್ತು ಕ್ರಮಕ್ಕೆ ಸಂಘ ಆಗ್ರಹಿಸಿದೆ.

ಮನವಿ ಸ್ವೀಕರಿಸಿದ ತಹಶೀಲ್ದಾರ ಡಾ: ಮೋಹನ ಭಸ್ಮೆಯವರು ತಪ್ಪಿತಸ್ಥ ಅಧಿಕಾರಿಗೆ ನೋಟಿಸ್ ನೀಡಿ, ಕ್ರಮ ಜರುಗಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಪತ್ರಕರ್ತರ ಸಂಘದ ಗೋಕಾಕ ತಾಲೂಕ ಘಟಕದ ಅಧ್ಯಕ್ಷ ಅಡಿವೆಪ್ಪ ಪಾಟೀಲ್, ಉಪಾಧ್ಯಕ್ಷ ವೀರೇಂದ್ರ ಪತಕಿ ಪ್ರಧಾನ ಕಾರ್ಯದರ್ಶಿ ನಾಗೇಶ್ ತಹಶೀಲ್ದಾರ, ಸಹ ಕಾರ್ಯದರ್ಶಿ ರಮೇಶ್ ಬಿರಡಿ, ಖಜಾಂಚಿ ಬಸವಣ್ಣಿ ತಿಗಡಿ ಸೇರಿದಂತೆ ಅನೇಕರಿದ್ದರು.

Leave a Reply

Your email address will not be published. Required fields are marked *

You missed

error: Content is protected !!