Spread the love

ಸಂಯುಕ್ತ ಟೈಮ್ಸ್, ಬೆಳಗಾವಿ: ಸರಕಾರದಿಂದ ಹತ್ತು ಲಕ್ಷ ರೂ. ವೈಯಕ್ತಿಕ ಲೋನ್ ಕೊಡಿಸಿ ನಿಮಗೆ 5 ಲಕ್ಷ ಸಬ್ಸಿಡಿ ಕೊಡಿಸುವುದಾಗಿ ನಂಬಿಸಿ ಒಬ್ಬೊಬ್ಬರ ಕಡೆ 20 ಸಾವಿರ ರೂ. ಹಣ ಪಡೆದು ಲಕ್ಷಾಂತರ ರೂ. ವಂಚಿಸಿ ಪರಾರಿಯಾದ ಘಟನೆ ಬೆಳಗಾವಿ ನಗರದಲ್ಲಿ ನಡೆದಿದೆ

50ಕ್ಕೂ ಅಧಿಕ ಮಹಿಳೆಯರಿಂದ 20 ಸಾವಿರ ರೂ.ಗಳಂತೆ ಹಣ ಪಡೆದು ಸರಕಾರದ ಲಕ್ಷ ಲಕ್ಷ ಹಣನೂ ಇಲ್ಲ. ಇತ್ತ ತಾವು ಕೂಡಿಟ್ಟ ಹಣ ಕೊಟ್ಟಿದ್ದೂ ಕೊಟ್ಟು ಈಗ ಹಣ ಕಳೆದುಕೊಂಡ ಮಹಿಳೆಯರು ನ್ಯಾಯಕ್ಕಾಗಿ ಮಾರ್ಕೆಟ್ ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ. ಬೆಳಗಾವಿ ನಗರದ ಸಮರ್ಥ ನಗರದ ರಹವಾಸಿ ಭಾಗ್ಯಶ್ರೀ ಹುಬ್ಬಳ್ಳಿಕರ ಎಂಬ ಮಹಿಳೆ ಸುಮಾರು 50 ಕ್ಕೂ ಅಧಿಕ ಮಹಿಳೆಯರಿಗೆ ಮೋಸ ಮಾಡಿದಾಕೆ. ಈಕೆ ಕರ್ನಾಟಕ ಬ್ಯಾಂಕ್ ಲಿಮಿಟೆಡ್ ನ ಖಾಸಗಿ ಬ್ಯಾಂಕ್ ಹೆಸರಿನಲ್ಲಿ ಜನರಿಗೆ ಪಂಗನಾಮ ಹಾಕಿ ಪರಾರಿಯಾಗಿದ್ದಾರೆ.

ಕರ್ನಾಟಕ ಬ್ಯಾಂಕ್‌ ಲಿಮಿಟೆಡ್ ನ ನಾಲ್ವರ ವಿರುದ್ಧ ಮಾರ್ಕೆಟ್ ಪೊಲೀಸ್ ಠಾಣೆಯ ಮೆಟ್ಟಿಲು ಏರಿರುವ ವಂಚನೆಗೆ ಒಳಗಾದ ಮಹಿಳೆರು ಭಾಗ್ಯಶ್ರೀ ಹುಬ್ಬಳ್ಳಿಕರ ಸೇರಿದಂತೆ ವಿಶಾಲ ಕೋಕಿತಕರ, ಜ್ಯೋತಿಭಾ ಕೋಕಿತಕರ ಹಾಗೂ ಬ್ಯಾಂಕ್ ನ ಕ್ಯಾಶಿಯರ್ ವಿರುದ್ಧ ದೂರು ನೀಡಿದ್ದಾರೆ. ಹಣ ಕಳೆದುಕೊಂಡ ಲಕ್ಷ್ಮೀ ತಳವಾರ ಮಾತನಾಡಿ ಭಾಗಶ್ರೀ ಎನ್ನುವರು ಹಣ ಪಡದು 10 ಲಕ್ಷ.ರೂ ಲೋನ್ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿ ಪರಾರಿಯಾಗಿದ್ದಾರೆ, ನಮ್ಮ ಎಲ್ಲರ ಕಾಲ್ ಲಿಸ್ಟ್ ಬ್ಲಾಕ್ ಮಾಡಿದ್ದಾರೆ ಪ್ರತಿಯೊಬ್ಬರು 20 ರಿಂದ 25 ಸಾವಿರ ಹಣ ನೀಡಿದೇವೆ, ಒಂದುವರ್ಷವಾಯಿತು ಎಂದು ತಿಳಿಸಿದರು.

ಆಫೀಯಾ ಬಶೀ‌ರ್ ಮಾತನಾಡಿ ಕರ್ನಾಟಕ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತೀದ ಮಹಿಳೆ ಭಾಗಶ್ರೀ ಎನ್ನುವರು 25 ಸಾವಿರಕ್ಕೂ ಅಧಿಕ ಹಣ ಪಡೆದು ವಂಚನೆ ಮಾಡಿದ್ದಾರೆ, ಮಾರ್ಕೆಟ್ ಪೊಲೀಸ್‌ ಠಾಣೆಗೆ ದೂರು ನೀಡಿವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *

You missed

error: Content is protected !!