Spread the love

ಸಂಯುಕ್ತ ಟೈಮ್ಸ್, ರಾಯಚೂರು:  ಕಾಮಗಾರಿ ಮತ್ತು ಸಾಮಗ್ರಿ ಖರೀದಿ ಬಿಲ್‌ಗಳಲ್ಲಿ ವ್ಯತ್ಯಾಸ ಮಾಡಿ ಹಣ ದುರ್ಬಳಕೆ, ಕರ್ತವ್ಯ ಲೋಪ ಹಾಗೂ ಸರ್ಕಾರಿ ಬೊಗ್ಗಸಕ್ಕೆ ನಷ್ಟ ಉಂಟುಮಾಡಿದ ಆರೋಪದ ಮೇಲೆ ರಾಯಚೂರು ಜಿಲ್ಲೆಯ ಇಬ್ಬರು ಪಿಡಿಓಗಳನ್ನು ಅಮಾನತ್ತುಗೊಳಿಸಲಾಗಿದೆ.

ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಪಂ ಪಿಡಿಓ ಶಿವರಾಜ ಹಾಗೂ ಲಿಂಗಸುಗೂರು ತಾಲೂಕಿನ ಕೋಠಾ ಗ್ರಾಪಂ ಪಿಡಿಓ ಗಂಗಮ್ಮ ಇಬ್ಬರನ್ನೂ ಅಮಾನತ್ತುಗೊಳಿಸಿ ರಾಯಚೂರು ಜಿಪಂ ಸಿಇಓ ರಾಹುಲ್ ತುಕಾರಾಮ್ ಆದೇಶ ಹೊರಡಿಸಿದ್ದಾರೆ.

ಪಿಡಿಓ ವಿರುದ್ಧ 15ನೇ ಹಣಕಾಸು ಯೋಜನೆಯಲ್ಲಿ 26,71,303 ರೂ. ದುರುಪಯೋಗ ಆರೋಪ ಕೇಳಿಬಂದಿತ್ತು. ಕಾಮಗಾರಿಗಳ ಬಿಲ್ ಹಾಗೂ ಸಾಮಗ್ರಿಗಳ ಖರೀದಿ ಬಿಲ್‌ಗಳಲ್ಲಿ ವ್ಯತ್ಯಾಸ ಮಾಡಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಈಹಿನ್ನೆಲೆ ಗಂಗಮ್ಮರನ್ನ ಅಮಾನತ್ತುಮಾಡಲಾಗಿದೆ. 

ಇನ್ನೂ ದೇವದುರ್ಗ ತಾಲೂಕಿನ ಚಿಂಚೋಡಿ ಗ್ರಾಪಂ ಪಿಡಿಓ ಶಿವರಾಜ, 52.81 ಲಕ್ಷ ಮೊತ್ತದ ಅಪೂರ್ಣ ದಾಖಲೆ ನೀಡಿದ್ದ. ಉಳಿದ 14.77 ಲಕ್ಷ ಮೌಲ್ಯದ ಹಣ ಬಳಕೆಗೆ ದಾಖಲೆ ಕೊಟ್ಟಿರಲಿಲ್ಲ. ಹೀಗಾಗಿ ಕ್ರಿಯಾಯೋಜನೆಯ ಮೊತ್ತಕ್ಕಿಂತ ಹೆಚ್ಚು ಹಣ ಪಾವತಿಸಿ ಬೊಕ್ಕಸಕ್ಕೆ ನಷ್ಟ ಉಂಟು ಮಾಡಿದ ಆರೋಪದ ಮೇಲೆ ಶಿವರಾಜ ಅವರನ್ನು ಅಮಾನತ್ತುಗೊಳಿಸಲಾಗಿದೆ. 

Leave a Reply

Your email address will not be published. Required fields are marked *

You missed

error: Content is protected !!