Spread the love

ಸಂಯುಕ್ತ ಟೈಮ್ಸ್, ಬಾಗಲಕೋಟೆ: ಚಿಕ್ಕಪ್ಪನೇ 3 ವರ್ಷದ ಮಗುವಿನ ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಬೆನಕನವಾರಿ ಗ್ರಾಮದಲ್ಲಿ ನಡೆದಿದೆ.

ಮಾರುತಿ ವಾಲೀಕಾರ ಎಂಬುವವರ ಮಗುವನ್ನು ಹತ್ಯೆ ಮಾಡಲಾಗಿದೆ. ಮಾರುತಿ ಸಹೋದರ ಭೀಮಪ್ಪ ವಾಲೀಕಾರನಿಂದಲೇ ಈ ಒಂದು ಕೃತ್ಯ ನಡೆದಿದೆ.

ಮಗು ಅಂಗನವಾಡಿಗೆ ತೆರಳಿತ್ತು, ಈ ವೇಳೆ ಮಾರುತಿಯ ಸಹೋದರ ಭೀಮಪ್ಪ ವಾಲೀಕಾರ ಅಲ್ಲಿಗೆ ತೆರಳಿ, ಅಂಗನವಾಡಿಯ ಹಿಂಭಾಗದಲ್ಲಿ ಮಗುವಿನ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಅಮೀನಗಡ ಠಾಣೆಯ ಪೊಲೀಸರು ಭೀಮಪ್ಪ ವಾಲೀಕಾರನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ. ಈ ಭೀಕರ ಕೊಲೆಗೆ ಕಾರಣವೇನೆಂದು ಅಧಿಕೃತ ಮಾಹಿತಿ ಲಭ್ಯವಿಲ್ಲದಿದ್ದರೂ, ಆರೋಪಿಯು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಅಮೀನಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!