ಗೋಕಾಕ: ಕಂದಾಯ ನಿರೀಕ್ಷಕರ ಕಚೇರಿಯ ಸಿಬ್ಬಂದಿಯ ಲಂಚಾವತಾರದ ಕುರಿತು “ಸಂಯುಕ್ತ ಟೈಮ್ಸ್” ಸುದ್ದಿ ಪ್ರಸಾರ ಮಾಡಿತ್ತು. ಪತ್ರಿಕೆ ಸಂಪಾದಕರು ಕಾರ್ಯನಿಮಿತ್ತ ಕಂದಾಯ ನಿರೀಕ್ಷಕರ ಕಚೇರಿ ಹೋದ ಸಂದರ್ಭದಲ್ಲೇ ವಿಡಿಯೋ ಮಾಡದಂತೆ ಪತ್ರಿಕೆ ಸಂಪಾದಕರಿಗೆ ಗುಂಡಾಗಿರಿ ತೋರಿದ, ಬೆದರಿಕೆ ಹಾಕಿದ, ಅಸಭ್ಯವಾಗಿ ವರ್ತಿಸಿದ, ಡೂಪ್ಲಿಕೇಟ್ ಪತ್ರಕರ್ತ ಎಂಬಿತ್ಯಾದಿ ಹಲವು ಕೆಟ್ಟ ಪದಗಳಿಂದ ನಿಂದಿಸಿದ ಹಾಗೂ ವಿಡಿಯೋ ಮಾಡುವ ಮೊಬೈಲ್ ನ್ನೇ ಕಿತ್ತುಕೊಳ್ಳೋಕೆ ಮುಂದಾದ ಗೋಕಾಕ ಕಂದಾಯ ನಿರೀಕ್ಷಕ ಶಿವಾನಂದ ಹಿರೇಮಠನ ವಿಡಿಯೋ ಎಲ್ಲೆಡೆ ಹಲವಾರು ಸುದ್ದಿ ಮಾಧ್ಯಮಗಳ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಸದರಿ ವಿಷಯ ಕುರಿತು ಹಲವಾರು ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದರೂ ಕೂಡಾ ಈತನ ಮೇಲಾಧಿಕಾರಿಗಳು ಇವತ್ತಿನವರೆಗೂ ಶಿವಾನಂದ ಹಿರೇಮಠನ ವಿರುದ್ಧ ಯಾವುದೇ ಶಿಸ್ತು ಕ್ರಮವನ್ನು ಜರುಗಿಸಿಲ್ಲ ಅಥವಾ ಈತನನ್ನು ಅಮಾನತ್ತು ಮಾಡಿಲ್ಲ.
ಪತ್ರಕರ್ತಕರಿಗೆ ಈ ರೀತಿ ಗುಂಡಾಗಿರಿ ಹಾಗೂ ದರ್ಪ ತೋರಿದರೆ, ಇನ್ನು ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳಿಗಾಗಿ ಕಂದಾಯ ನಿರೀಕ್ಷಕರ ಕಚೇರಿಗೆ ಹೋದಾಗ ಇನ್ನ್ಯಾವ ರೀತಿ ಈತ ನಡೆದುಕೊಳ್ಳಬಹುದೆಂಬುದು ಊಹೆಗೂ ನಿಲುಕಲ್ಲ. ಇಂತಹ ಮನಸ್ಥಿತಿಯುಳ್ಳ ಸಾರ್ವಜನಿಕ ಸೇವಕರು ಕಂದಾಯ ಇಲಾಖೆಗೆ ಕಪ್ಪು ಚುಕ್ಕೆ ಇದ್ದ ಹಾಗೆ.
ಇದೆಲ್ಲವನ್ನು ಗಮನಿಸಿದರೆ ಸಾರ್ವಜನಿಕರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದಂತೂ ನಿಜ. ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರಭಾವತಿ ಪಕ್ಕೀರಪೂರ ಹಾಗೂ ಗೋಕಾಕ ತಹಶೀಲ್ದಾರ ಡಾ: ಮೋಹನ ಭಸ್ಮೆ ಅವರುಗಳು ಶಿವಾನಂದ ಹಿರೇಮಠನ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರಾ? ಅಥವಾ ಈತ ಉನ್ನತ ಅಧಿಕಾರಿಗಳಿಗೂ ಸಹಿತ ಪ್ರಭಾವ ಬೀರುವಷ್ಟು ಶಕ್ತಿವಂತನಾ?, ಇನ್ನಷ್ಟು ಪತ್ರಕರ್ತರಿಗೆ ಹಾಗೂ ಸಾರ್ವಜನಿಕರಿಗೆ ದಬ್ಬಾಳಿಕೆ ಮಾಡಲಿ, ದರ್ಪ ತೋರಿಸಲಿ, ಅಸಭ್ಯ ಮಾತುಗಳನ್ನಾಡಲಿ, ಉದ್ದುದ ನಾಲಿಗೆ ಹರಿಬಿಡಲಿ, ಮನಬಂದಂತ್ತೆ ವರ್ತಿಸಲಿ ಹಾಗೂ ಗುಂಡಾಗಿರಿ ಮಾಡಲಿ ಅಂತಾ ಮೇಲಾಧಿಕಾರಿಗಳು ಸುಮ್ಮನಿದ್ದಾರಾ?, ಅಥವಾ ಇದೆಲ್ಲವನ್ನು ನೋಡಿಯೂ ಸಹಿತ ನೋಡದಂತೆ ಕುರುಡು ಜಾಣತನವನ್ನು ಪ್ರದರ್ಶಿಸುತ್ತಿದ್ದಾರಾ?, ಪತ್ರಕರ್ತರು ಈತನ ಕಚೇರಿಯ ಭ್ರಷ್ಟಾಚಾರ ಬಯಲು ಮಾಡಿದ್ದೇ ತಪ್ಪಾ? ಎಂಬ ಇನ್ನು ಹತ್ತು ಹಲವು ಅನುಮಾನಗಳು ಸಾರ್ವಜನಿಕರನ್ನು ಹಾಗೂ ಸುದ್ದಿ ಬಿತ್ತರಿಸಿದ ನಮ್ಮ ಮಾಧ್ಯಮ ಮಿತ್ರರನ್ನು ಕಾಡುತ್ತಿವೆ.
ಈ ಮೇಲಿನ ಎಲ್ಲಾ ವಿಷಯಗಳಿಗೆ ಮೇಲಾಧಿಕಾರಿಗಳಾದ ನೀವುಗಳು ಸಾರ್ವಜನಿಕರ ಹಾಗೂ ಮಾಧ್ಯಮ ಮಿತ್ರರರ ಅನುಮಾನಗಳಿಗೆ ಅಥವಾ ಗೊಂದಲಗಳಿಗೆ ತೆರೆ ಎಳೆಯಬೇಕಾದರೆ ಶಿವಾನಂದ ಹಿರೇಮಠನನ್ನುಈ ಕೊಡಲೇ ಅಮಾನತ್ತು ಮಾಡಬೇಕು ಅಥವಾ ಈತನ ವಿರುದ್ಧ ಕರ್ನಾಟಕ ನಾಗರೀಕ ಸೇವಾ ನಿಯಮದಡಿ ಶಿಸ್ತು ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಹಾಗೂ ಮಾಧ್ಯಮ ಮಿತ್ರರರು ಆಗ್ರಹಿಸಿದ್ದಾರೆ.
ಸುದ್ದಿ ಪ್ರಸಾರಿಸಿದ ಮಾಧ್ಯಮಗಳು:
- ಸಂಯುಕ್ತ ಟೈಮ್ಸ್ :
a. ಗೋಕಾಕ ಕಂದಾಯ ನಿರೀಕ್ಷಕರ ಕಛೇರಿಯಲ್ಲಿ ಲಂಚ, ಲಂಚ, ಲಂಚ: https://www.facebook.com/share/v/ViVbSwPKUFb84VLr/?mibextid=qi2Omg - b. https://www.facebook.com/share/v/iikddKJjsrcahCUe/?mibextid=w8EBqM
- c. https://fb.watch/q9GelPmpoV/?mibextid=2JQ9oc
d. https://www.facebook.com/share/v/YzuqxGxhoGeHyUxd/?mibextid=xfxF2i - e. https://youtu.be/2M0QgjMvVOk?si=NiHt-cdEv9I7MYlp
- ಲೋಕವಾರ್ತೆ: https://youtu.be/i6NbYlqIzCQ
- ಎಚ್ಚರಿಕೆ ಕನ್ನಡ ನ್ಯೂಸ್: https://www.echarikekannadanews.com/%E0%B2%AC%E0%B3%86%E0%B2%B3%E0%B2%97%E0%B2%BE%E0%B2%B5%E0%B2%BF-215/
- ವಿವೇಕವಾರ್ತೆ: https://youtu.be/ambFQiqhnq0
- MR News: https://www.youtube.com/watch?si=MyaoFYOlD-Ley4c7&v=iycVQfNCySY&feature=youtu.be
- RK News: https://youtu.be/qiAQnHGvAOc?si=SqWNfk8MZTrTES1P
- ಹೇ ಸೀತಾ ರಾಮ ನ್ಯೂಸ್: https://www.youtube.com/watch?v=ioUK7s5IFjU&t=29s, https://youtu.be/tELTn95RHyg?si=Z3owSvaRxBOhgc3H

