ಮ್ಯಾಕ್ಸ್ವೆಲ್ 2021ರಿಂದ RCB ತಂಡದಲ್ಲಿ ಮ್ಯಾಕ್ಸ್ವೆಲ್ ಮುಂದುವರಿದಿದ್ದು, ಸದ್ಯ ಬೆಂಗಳೂರು ಫ್ರಾಂಚೈಸಿ 14.25 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಕಳೆದ ಋತುವಿನಲ್ಲಿ ಮ್ಯಾಕ್ಸ್ವೆಲ್ 183.49 ಸ್ಟ್ರೈಕ್ ರೇಟ್ನಲ್ಲಿ 400 ರನ್ ಗಳಿಸಿದ್ದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್ ಸಿಕ್ಕಿದೆ. ಬೆಸ್ಟ್ ಫಾರ್ಮ್ನಲ್ಲಿ ಮುನ್ನುಗುತ್ತಿದ್ದ ಆಸ್ಟ್ರೇಲಿಯಾದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಗಾಯಗೊಂಡಿದ್ದಾರೆ. ಬಿಗ್ ಬ್ಯಾಷ್ ಲೀಗ್ (BBL)ನಲ್ಲಿ ಆಡುವಾಗ ಮ್ಯಾಕ್ಸ್ವೆಲ್ ಕೈಗೆ ಗಾಯವಾಗಿದೆ.
ಬಿಗ್ ಬ್ಯಾಷ್ ಲೀಗ್ ನ 13ನೇ ಸೀಸನ್ ಗುರುವಾರದಿಂದ ಆರಂಭವಾಗಿದೆ. ಮೊದಲ ಪಂದ್ಯದಲ್ಲಿ ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಬ್ರಿಸ್ಬೇನ್ ಹೀಟ್ ತಂಡಗಳು ಮುಖಾಮುಖಿಯಾಗಿದ್ದವು. ಮ್ಯಾಕ್ಸ್ವೆಲ್ ಮೆಲ್ಬೋರ್ನ್ ಸ್ಟಾರ್ಸ್ ಪರ ಆಡಿದ್ದರು. ಆದರೆ ಪಂದ್ಯದಲ್ಲಿ ಮ್ಯಾಕ್ಸ್ವೆಲ್ ಅವರ ಕೈಗೆ ಗಾಯವಾಗಿದೆ.
ಇದರೊಂದಿಗೆ ಮುಂದಿನ ಪಂದ್ಯಗಳಲ್ಲಿ ಮ್ಯಾಕ್ಸ್ವೆಲ್ ಆಡುವುದಿಲ್ಲ ಎಂದು ಮೆಲ್ಬೋರ್ನ್ ಸ್ಟಾರ್ಸ್ ತಿಳಿಸಿದೆ. ಪರ್ತ್ ಸ್ಕ್ಯಾಟರ್ಸ್ ವಿರುದ್ಧ ನಡೆಯಲಿರುವ ಪಂದ್ಯದಲ್ಲಿ ಆಡುವುದಿಲ್ಲ ಎನ್ನಲಾಗಿದೆ. ಮೆಲ್ಬೋರ್ನ್ ಸ್ಟಾರ್ಸ್ ಅವರ ಗಾಯದ ಕುರಿತು ಹೆಚ್ಚಿನ ಮಾಹಿತಿಯನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದೆ.
ಮ್ಯಾಕ್ಸ್ವೆಲ್ ಗಾಯದ ಕುರಿತು ತಿಳಿಯುತ್ತಿದ್ದಂತೆ ಆರ್ಸಿಬಿ ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರ ಬೇಗ ಗುಣಮುಖರಾಗಲಿ ಎಂದು ಕಾಮೆಂಟ್ಸ್ ಮಾಡ್ತಿದ್ದಾರೆ. ಗಾಯದ ತೀವ್ರತೆ ಹೆಚ್ಚಾಗಿದ್ದರೆ ಐಪಿಎಲ್ನಲ್ಲಿ ಆಡುವ ಅವಕಾಶ ಕಷ್ಟ ಸಾಧ್ಯ ಎನ್ನಲಾಗಿದೆ.

