Spread the love

ಸಂಯುಕ್ತ ಟೈಮ್ಸ್, ರಾಯಬಾಗ: ತಾಲೂಕಿನ ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಹಂದಿಗುಂದ ಗ್ರಾಮದ ಹೊರವಲಯದಲ್ಲಿ KA-23, A-0480 ಇನೋವಾ ಕಾರ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿಯ ವಿದ್ಯುತ್ ಕಂಬಕ್ಕೆ ರಭಸವಾಗಿ ಗುದ್ದಿದ ಕಾರಣ ಅಪಘಾತಕ್ಕಿಡಾಗಿದ್ದು ಅಪಘಾತವಾದ ಸ್ಥಳದಲ್ಲಿಯೇ ಓರ್ವ ವ್ಯಕ್ತಿ ಹಾಗೂ ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಇನ್ನೊರ್ವನು ಸಾವನ್ನಪ್ಪಿದ ದಾರುಣ ಘಟನೆಯೂಂದು ಶನಿವಾರ ಸಂಜೆ 6 ಗಂಟೆಗೆ ಜರುಗಿದೆ.

ಗುರುಪಾದ ನಿಂಗನೂರ(47) ಅದೇ ಗ್ರಾಮದ ಈರಪ್ಪ ಚನ್ನಬಸು ಉಗಾರೆ(32) ಮೃತಪಟ್ಟ ದುರ್ದೈವಗಳು. ಇಮಾಮ್ ರಾಜೇಸಾಬ ಸನದಿ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಹಾರೂಗೇರಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಾರು ಚಾಲಕ ಸದ್ದಾಂ ಹಟಲಸಾಬ್ ಪಠಾಣ ಪರಾರಿಯಾಗಿದ್ದು. ಹಾರೂಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಂದಿಗುಂದ ಗ್ರಾಮದ ಅಪಘಾತವಾದ ಘಟನಾ ಸ್ಥಳಕ್ಕೆ ಹಾರೂಗೇರಿ ಠಾಣಾ CPI ರವಿಚಂದ್ರನ್ ಬಡಪಕೀರಪ್ಪಣ್ಣವರ, PSI ಗಿರಿಮಲ್ಲಪ್ಪ ಉಪ್ಪಾರ, ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸುತ್ತಿದ್ದು, ಈ ಕುರಿತು ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

You missed

error: Content is protected !!