ಸಂಯುಕ್ತ ಟೈಮ್ಸ್, ಗೋಕಾಕ: ಗೋಕಾಕ ಸಬ್-ಜೈಲನಲ್ಲಿ ಅಪರಾಧಿಯಾಗಿದ್ದ ಈರಣ್ಣ ಮಲ್ಲಪ್ಪ ಪೈರಾಸಿ ಎಂಬ 27 ವರ್ಷದ ಯುವಕ ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಈರಣ್ಣ ಮಲ್ಲಪ್ಪ ಪೈರಾಸಿ ಹುಕ್ಕೇರಿ ತಾಲೂಕಿನ ಪರಕನಟ್ಟಿ ಗ್ರಾಮದ ನಿವಾಸಿಯಾಗಿದ್ದಾರೆ.

ಕೇವಲ ಒಂದು ದಿನದ ಹಿಂದಷ್ಟೇ ಅಂದರೆ ಮಂಗಳವಾರ ದಿನಾಂಕ: 24-09-2024 ರಂದು ಮಧ್ಯಾಹ್ನ 2:30 ಸಮಯಕ್ಕೆ ಚೆಕ್ಕ ಬೌನ್ಸ್ ಪ್ರಕರಣದ ಹಿನ್ನಲೆಯಲ್ಲಿ ನ್ಯಾಯಾಲಯದಿಂದ ಬಂಧಸಿ ಗೋಕಾಕ ಸಬ್-ಜೈಲನಲ್ಲಿ ಈರಣ್ಣ ಪೈರಾಸಿ ಅವರನ್ನು ಇಡಲಾಗಿತ್ತು.
ಕೈದಿ ಈರಣ್ಣ ಮಲ್ಲಪ್ಪ ಪೈರಾಸಿಗೆ ಬುಧವಾರ ದಿನಾಂಕ:25-09-2024 ರಂದು ಬೆಳಿಗ್ಗೆ 3 ಘಂಟೆಗೆ ಏಕಾಏಕಿ ತೀವ್ರ ಎದೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಗೋಕಾಕ ಸಬ್-ಜೈಲನ ಜೈಲರ್ ಲಕ್ಷ್ಮೀ ಹಿರೇಮಠ ಅವರು ಸಂಯುಕ್ತ ಟೈಮ್ಸ್ ಗೆ ತಿಳಿಸಿದ್ದಾರೆ.
ಈರಣ್ಣ ಪೈರಾಸಿ ಅವರ ಮೃತದೇಹವನ್ನು ಗೋಕಾಕ ಸರ್ಕಾರಿ ಆಸ್ಪತ್ರೆಯಲ್ಲಿ ಪೋಸ್ಟ್ ಮಾರ್ಟಮ್ ನಡೆಸಿ ಈಗಾಗಲೇ ಜೈಲಾಧಿಕಾರಿಗಳು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಈ ಕುರಿತು ಗೋಕಾಕ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

