Spread the love

ಸಂಯುಕ್ತ ಟೈಮ್ಸ್, ಗೋಕಾಕ: 02-07-2024 ರಂದು 11-00 ಗಂಟೆಗೆ ಗೋಕಾಕದ ಬಸ್ ಸ್ಟಾಂಡದಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿ ಹೋಗಿದ್ದ ಮೋಟಾರ್ ಸೈಕಲ ಮತ್ತು ದಿನಾಂಕ: 10-03-2024 ರಂದು ಮದ್ಯಾಹ್ನ 2 ಗಂಟೆಯಿಂದ ರಾತ್ರಿ 09-00 ಗಂಟೆಯ ನಡುವಿನ ಅವಧಿಯಲ್ಲಿ ಗೋಕಾಕ ನಗರದ ಸೋಮವಾರಪೇಟದಲ್ಲಿ ತಮ್ಮ ಮನೆಯ ಮುಂದೆ ನಿಲ್ಲಿಸಿದ್ದ TVS ಕಂಪನಿಯ ಸ್ಕೂಟಿ ಕಳ್ಳತನವಾದ ಕುರಿತು ಗೋಕಾಕ ಶಹರ ಪೊಲೀಸ ಠಾಣೆಯಲ್ಲಿ ಪ್ರತ್ಯೇಕವಾಗಿ ಎರಡು ಪ್ರಕರಣಗಳು ದಾಖಲಾಗಿದ್ದವು.

ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಭೀಮಾಶಂಕರ ಗುಳೇದ ಮತ್ತು ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳಾದ ಕು.ಶೃತಿ ಎಚ್.ಎಸ್. ಮತ್ತು. ಆರ್.ಬಿ ಬಸರಗಿ ಗೋಕಾಕ DySP ಡಿ.ಎಚ್.ಮುಲ್ಲಾ, ಗೋಕಾಕ ವೃತ್ತದ CPI, ಗೋಪಾಲ ರಾಠೋಡ ರವರ ಮಾರ್ಗದರ್ಶನದಲ್ಲಿ ಗೋಕಾಕ ಶಹರ ಪೊಲೀಸ ಠಾಣೆಯ PSI ಕೆ. ವಾಲೀಕಾರ ಮತ್ತು ಸಿಬ್ಬಂದಿಗಳಾದ ಕೆ. ಹಕ್ಯಾಗೋಳ, ವಿಠಲ ನಾಯಿಕ, ಎಸ್. ತೋರಗಲ್, ಎ. ಕಾಪಸಿ ಎನ್. ಬೆಳಗಲಿ ಸೇರಿದಂತೆ ಇನ್ನುಳಿದ ಸಿಬ್ಬಂದಿಗಳು ಪ್ರಕರಣದ ಬೆನ್ನಟ್ಟಿ ದಿನಾಂಕ: 05-09-2024 ರಂದು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳಾದ ನಿಂಗಪ್ಪ ಉದ್ದಪ್ಪ ಪಿಡಾಯಿ ಸಾ। ದೇವಪುರಹಟ್ಟಿ ಹಾಗೂ ಸಂತೋಷ ಗೂಳಪ್ಪಾ ಪಾಟೀಲ ಸಾ।। ತುಕ್ಕಾನಟ್ಟಿ ಇವರನ್ನು ಪತ್ತೆ ಹಚ್ಚಿ ಬಂಧಿಸಿ ತನಿಖೆಯ ವೇಳೆಯಲ್ಲಿ ಸದರಿ ಆರೋಪಿತರು ಕಳ್ಳತನ ಮಾಡಿದ್ದ ಸುಮಾರು 5,00,000 /- ರೂ ಮೌಲ್ಯದ ವಿವಿಧ ಕಂಪನಿಗಳ ಒಟ್ಟು 10 ಮೋಟಾರ್ ಸೈಕಲಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಪ್ರಕರಣವನ್ನು ಭೇದಿಸಿದ ಗೋಕಾಕ ಪೋಲಿಸ ಸಿಬ್ಬಂದಿಗಳನ್ನು ಬೆಳಗಾವಿ ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿಗಳಾದ ಭೀಮಾಶಂಕರ ಗುಳೇದ ಮತ್ತು ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿಗಳಾದ ಕು.ಶೃತಿ HS ಮತ್ತು. ಆರ್.ಬಿ ಬಸರಗಿಯವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲದೇ ವಾಹನಗಳನ್ನು ಕಳೆದುಕೊಂಡಿದ್ದ ಮಾಲೀಕರು ನಿಟ್ಟುಸಿರು ಬಿಡುವಂತಾಗಿದೆ.

Leave a Reply

Your email address will not be published. Required fields are marked *

You missed

error: Content is protected !!