Spread the love

ಸಂಯುಕ್ತ ಟೈಮ್ಸ್, ಮೂಡಲಗಿ:  ಹೊಲಕ್ಕೆ ನೀರು ಹಾಯಿಸುವ ವಿಚಾರವಾಗಿ ಮೂವರು ನಡುವೆ ಜಗಳ ನಡೆದು ಅದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ತಾಲೂಕಿನ ಪುಲಗಡ್ಡಿ ಗ್ರಾಮದಲ್ಲಿ ಸೋಮವಾರ ನಡೆದಿದೆ.

ರಾಮಪ್ಪ ಬಸವಂತಪ್ಪ ಕೌಜಲಗಿ (25) ಮೃತ ವ್ಯಕ್ತಿ, ಸಿದ್ದಪ್ಪ ಮಲ್ಲಪ್ಪ ಕೌಜಲಗಿ (24) ಕೊಲೆ ಮಾಡಿದ ಆರೋಪಿ ಇವರಿಬ್ಬರು ಸಂಬಂಧಿಕರು.  ಸೋಮವಾರದಂದು ಹೊಲಕ್ಕೆ ಇಬ್ಬರು ನೀರು ಹಾಯಿಸುತ್ತಿದ್ದರು.

ನೀರಿಗಾಗಿ ರಾಮಪ್ಪ ಹಾಗೂ ಅವನ ತಂದೆ ಬಸವಂತಪ್ಪ ಹಾಗೂ ಸಿದ್ದಪ್ಪನ ನಡುವೆ ಜಗಳವಾಗಿ ಅದು ವಿಕೋಪಕ್ಕೆ ತಿರುಗಿ ಸಿದ್ದಪ್ಪ ತನ್ನ ಕೈಯಲ್ಲಿದ್ದ ಕುಡುಗೋಲಿನಿಂದ ರಾಮಪ್ಪನನ್ನು ಕೊಚ್ಚಿ ಕೊಲೆ ಮಾಡಿದ್ದಾನೆ.

ಜಗಳವನ್ನು ತಡೆಯಲು ಹೋದ ರಾಮಪ್ಪನ ತಂದೆ ಬಸವಂತಪ್ಪನ ಮೇಲೇಯೂ ಹಲ್ಲೆ ಮಾಡಿರುವ ಬಗ್ಗೆ ಸಿದ್ದಪ್ಪ ಪೊಲೀಸ್ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ ಎನ್ನಲಾಗಿದೆ.  ಪೊಲೀಸ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ್ದಾರೆ.  ಇನ್ನು ಗಂಭೀರ ಗಾಯವಾದ ಬಸವಂತಪ್ಪನನ್ನು ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.  ಗ್ರಾಮದಲ್ಲಿ ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ SP ಶೃತಿ NS, DySP D. H ಮುಲ್ಲಾ, CPI ಶ್ರೀಶೈಲ್ ಬ್ಯಾಕೋಡ, PSI ರಾಜು ಪೊಜೇರಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!