Spread the love

ಸಂಯುಕ್ತ ಟೈಮ್ಸ್, ಮೂಡಲಗಿ: ಹಣಕ್ಕಾಗಿ ಮೂಡಲಗಿ ಪಟ್ಟಣದ ಪುರಸಭೆ ಸದಸ್ಯರಾದ ಈರಪ್ಪ ಮುನ್ಯಾಳ ಅವರನ್ನು  ಹನಿಟ್ರ್ಯಾಪ ಮಾಡಿದ ಆರೋಪಿಗಳಾದ KRS ಪಕ್ಷದ ಮೂಡಲಗಿ ತಾಲೂಕಾಧ್ಯಕ್ಷ ಅಬ್ದುಲ್ ಪೈಲವಾನ್ ಹಾಗೂ ಆತನ ಸ್ನೇಹಿತ ಸುಭಾನಿ ಹಾಗೂ ರೇಷ್ಮಾ ಕಡಬಿಶಿವಾಪುರ ಎಂಬ ಮಹಿಳೆಯನ್ನು ಪೊಲೀಸ್ ಅಧಿಕಾರಿಗಳು ಬಂಧಿಸಿ ನ್ಯಾಯಾಲಯ ಬಂಧನಕ್ಕೆ ಕಳಿಸಿರುವ ಘಟನೆ ರವಿವಾರದಂದು ಜರುಗಿದೆ.

ಪರಪುರುಷ ಮಹಿಳೆ ಇರುವ ರೂಮಗೆ ಹೋಗಿ ಅರೆನಗ್ನ ವಿಡಿಯೋ ಮಾಡಿಕೊಂಡಿದ್ದ ಆರೋಪಿಗಳು ಮೂಡಲಗಿ ಪುರಸಭೆ ಸದಸ್ಯ ಈರಪ್ಪ ಮುನ್ಯಾಳ ಅವರ ಬಳಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಆ ಪ್ರಕಾರ ಪುರಸಭೆ ಸದಸ್ಯ 9 ಲಕ್ಷ ಹಣ ನೀಡಿದ್ದು, ಮತ್ತೆ ಒಂದು ಲಕ್ಷಕ್ಕೆ ನೀಡುವಂತೆ ಒತ್ತಾಯಿಸಿದ್ದಾಕ್ಕಾಗಿ ಮನನೊಂದು ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಡಿ.7ರಂದು ದೂರು ದಾಖಲಿಸಿದ್ದು, ದೂರು ದಾಖಲಿಸಿಕೊಂಡ ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿದ ವೇಳೆ ಹಣಕ್ಕಾಗಿ ಹಾಗೂ ಈ ಕೃತ್ಯ ಮಾಡಲು ಓರ್ವ ವ್ಯಕ್ತಿ ಮಾರ್ಗದರ್ಶನ ನೀಡಿದ್ದಾನೆ ಎಂದು ಆರೋಪಿ ಹೇಳಿಕೆ ನೀಡಿದ್ದಾನೆ.

ಅವನ ಹೇಳಿಕೆಯಂತೆ ಪೊಲೀಸ್ ಅಧಿಕಾರಿಗಳು ತನಿಖೆಯನ್ನು ಮುಂದುವರಿಸಿದ್ದಾರೆ. ಹನಿಟ್ರ್ಯಾಪ ಮಾಡಿದ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಇನ್ನು ಹನಿಟ್ರ್ಯಾಪದಲ್ಲಿ ಭಾಗಿಯಾದ ಮಹಿಳೆಯ ಬಳಿ ಬೇರೆ ಬೇರೆ ವ್ಯಕ್ತಿಗಳ ವಿಡಿಯೋ ಇದ್ದಾವೆ ಹಾಗೂ ಈ ಹನಿ ಟ್ರ್ಯಾಪ್ ಮುಂಚೆ ಓರ್ವ ಅಧಿಕಾರಿಗೆ ಬಲೆ ಬೀಸಿದ್ದರು, ಆ ಅಧಿಕಾರಿ ಬದಲಿಗೆ ಸದಸ್ಯ ಬಿದ್ದಿದ್ದಾನೆ ಎನ್ನುವ ಬಗ್ಗೆ ಮಾಹಿತಿ ಬಲ್ಲಮೂಲಗಳಿಂದ ತಿಳಿದು ಬಂದಿದೆ.

ಘಟನೆಯ ಹಿನ್ನಲೆ:

ಪಟ್ಟಣದ KEB ಫ್ಲಾಟದ ರೇಷ್ಮಾ ಕಡಬಿಶಿವಾಪುರ ಎಂಬ ಮಹಿಳೆ ಜೊತೆಗೆ KRS ಪಕ್ಷದ ಮೂಡಲಗಿ ತಾಲೂಕಾಧ್ಯಕ್ಷ ಅಬ್ದುಲ್ ಪೈಲವಾನ್ ಹಾಗೂ ಆತನ ಸ್ನೇಹಿತ ಸುಭಾನಿ ಮೊದಲೇ ಸಂಚು ರೂಪಿಸಿದ ಹಾಗೆ ಡಿ. 2ರಂದು ರೇಷ್ಮಾ ಹಾಗೂ ಪುರಸಭೆ ಸದಸ್ಯ ಹುಕ್ಕೇರಿ ಪಟ್ಟಣದ ಲಾಡ್ಜ್ ಒಂದರಲ್ಲಿ ಅರೆನಗ್ನ ಬೆತ್ತಲೆಯಾದ ಸಂದರ್ಭದಲ್ಲಿ ರೊಮ್ ಒಳಗೆ ನುಗ್ಗಿದ ಅಬ್ದುಲ್, ಸುಭಾನಿ ಎಂಬುವವರು ವಿಡಿಯೋ ಮಾಡಿಕೊಂಡಿದ್ದರು.

ನಂತರ ಪುರಸಭೆ ಸದಸ್ಯ ಈರಪ್ಪ ಮುನ್ಯಾಳ ಅವರ ಬಳಿ 10 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಆ ಪ್ರಕಾರ ಪುರಸಭೆ ಸದಸ್ಯ 9 ಲಕ್ಷ ಹಣ ನೀಡಿದ್ದು, ಇನ್ನುಳಿದ ಒಂದು ಲಕ್ಷ ಕೊಡು ಇಲ್ಲವಾದರೆ ನಿನ್ನ ಖಾಸಗಿ ಕ್ಷಣದ ವಿಡಿಯೋ ಬಿಡುಗಡೆ ಮಾಡ್ತಿವಿ ಎಂದು ಬೆದರಿಕೆ ಹಾಕಿದರು ಎನ್ನಲಾಗಿದೆ. ಆ ಬೆದರಿಕೆಗೆ ಹೆದರಿ ಪುರಸಭೆ ಸದಸ್ಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಘಟನೆ ಜರುಗಿದೆ.

Leave a Reply

Your email address will not be published. Required fields are marked *

You missed

error: Content is protected !!