Spread the love

ಸಂಯುಕ್ತ ಟೈಮ್ಸ್, ಗದಗ: ಪರವಾನಗಿ ಹೊಂದಿದ ಭೂ ಮಾಪಕರ ಪರವಾನಗಿಯನ್ನು ನವೀಕರಿಸಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಭೂ ದಾಖಲೆ ಸಹಾಯಕ ನಿರ್ದೇಶಕ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ರೋಣ ತಾಲೂಕು ಭೂಮಾಪನಾ ಇಲಾಖೆಯ ಸಹಾಯಕ ನಿರ್ದೇಶಕ (ADLR) ವಿ. ಗಿರೀಶ್‌ ರವಿವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಗಜೇಂದ್ರಗಡ ತಾಲೂಕಿನ ಅರುಣಕುಮಾರ್‌ ನೀರಲಕೇರಿ ಎಂಬುವರು ಸರ್ವೇಯರ್‌ ಪರವಾನಗಿ ನವೀಕರಿಸಿಕೊಡುವಂತೆ ವಿ. ಗಿರೀಶ್‌ ಬಳಿ ಹೋದಾಗ, ಪರವಾನಗಿ ನವೀಕರಣಕ್ಕೆ 25 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಈ ಸಂಬಂಧ ಅರುಣಕುಮಾರ್‌ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ADLR ವಿ. ಗಿರೀಶ್‌ ಅವರು ರವಿವಾರ(ಅ6) ಸಂಜೆ ಗದಗ ನಗರದ ಸಾಯಿಬಾಬ ಗುಡಿಯ ಬಳಿ 25 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ DySP ವಿಜಯ್‌ ಬಿರಾದಾರ್‌ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದೆ.

Leave a Reply

Your email address will not be published. Required fields are marked *

You missed

error: Content is protected !!