ಸಂಯುಕ್ತ ಟೈಮ್ಸ್, ಘಟಪ್ರಭಾ: ಘಟಪ್ರಭಾ ಪೋಲಿಸರು ರೈತರ ನಿದ್ದೆಗೆಡಿಸಿದ್ದ ಮೂವರು ಖತರ್ನಾಕ ಕರೆಂಟ್ ಮೋಟಾರ್ ಹಾಗೂ ಕೇಬಲ್ ವೈರ್ ಖದೀಮರ ಹೆಡೆಮುರಿ ಕಟ್ಟಿ ಕಳ್ಳತನದ ವಸ್ತುಗಳನ್ನು ಇಂದು ಜಪ್ತಿ ಮಾಡಿದ್ದಾರೆ.

3 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಆರೋಪಿಗಳಿಂದ ವಿವಿಧ ಪ್ರಕರಣಗಳಲ್ಲಿ ಸುಮಾರು 3 ಲಕ್ಷ ರೂ. ಮೌಲ್ಯದ ಕರೆಂಟ್ ಮೋಟಾರ್, ಕೇಬಲ್ ವೈರ್ ಬಂಡಲ್ಗಳು ಸೇರಿದಂತೆ ಒಂದು ಮೋಟಾರ್ ಸೈಕಲ್ನ್ನು ಜಪ್ತಿ ಮಾಡಿದ್ದಾರೆ. ಕಲ್ಲೋಳಿ, ರಾಜಾಪೂರ ಮತ್ತು ಬೀರನಗಡ್ಡಿ ಗ್ರಾಮಗಳ ಹದ್ದಿಯಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದು ಪತ್ತೆಯಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸಿ ವಶಕ್ಕೆ ಪಡೆದಿದ್ದಾರೆ.
ಘಟಪ್ರಭಾ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಡಿ ಮುಲ್ಲಾ, ಪಿಎಸ್ಐಗಳಾದ ಹೆಚ್.ಕೆ.ನರಳೆ, ಎಮ್.ಎಸ್.ವನಹಳ್ಳಿ, ಪಿ.ಎಮ್.ಪಾಟೀಲ, ಆರ್.ಕೆ.ಹೊಳ್ಳರ, ಆರ್.ಆರ್.ಗಿಡ್ಡಪ್ಪಗೋಳ, ಬಿ.ಎಮ್.ತಳವಾರ, ಆರ್.ಕೆ.ಧುಮಾಳೆ, ಬಿ.ಎಸ್.ನಾಯಿಕ ಅವರು ಈ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಘಟಪ್ರಭಾ ಪೋಲಿಸರ ಈ ಕಾರ್ಯಕ್ಕೆ ಪೋಲಿಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿದ್ದಾರೆ ಹಾಗೂ ಕೇಬಲ್ ಕಳ್ಳರ ಹಾವಳಿಯಿಂದ ತತ್ತರಿಸಿದ್ದ ರೈತರು ನಿಟ್ಟುಸಿರು ಬಿಡುವಂತಾಗಿದೆ.

