Spread the love

ಸಂಯುಕ್ತ ಟೈಮ್ಸ್, ಬಾಗಲಕೋಟೆ: ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗಿದೆ. ನಕಲಿ ವೈದ್ಯರ ಆಚಾತುರ್ಯಕ್ಕೆ ಒಂದು ಜೀವ ಬಲಿ ಆಗಿದೆ. ಪೊಲೀಸರ ಪರಿಶೀಲನೆ ವೇಳೆ ಬಾಗಲಕೋಟೆ ಜಿಲ್ಲೆಯಲ್ಲಿ 384 ಜನರು ನಕಲಿ ವೈದ್ಯರು ಇರುವುದು ಪತ್ತೆಯಾಗಿದೆ.

ಅಚ್ಚರಿ ಅಂದರೆ SSLC, PUC, ITI, BA, B.Com ಓದಿದವರು ವೈದ್ಯರಾಗಿದ್ದಾರೆ. ಇದು ಜಿಲ್ಲೆಯಲ್ಲಿನ ಆರೋಗ್ಯ ಇಲಾಖೆ ಎಷ್ಟು ನಿರ್ಲಕ್ಷ್ಯ ವಹಿಸಿದೆ ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

ನಕಲಿ ವೈದ್ಯರು ಇರುವ ಪ್ರದೇಶವಾರು ವಿವರ:
ಜಮಖಂಡಿ: 60 ನಕಲಿ ವೈದ್ಯರಿದ್ದಾರೆ.
ಬೀಳಗಿ: 39 ನಕಲಿ ವೈದ್ಯರಿದ್ದಾರೆ. 
ಮುಧೋಳ: 37ನಕಲಿ ವೈದ್ಯರಿದ್ದಾರೆ. 
ಕಲಾದಗಿ: 29 ನಕಲಿ ವೈದ್ಯರಿದ್ದಾರೆ. 

50ಕ್ಕೂ ಹೆಚ್ಚು ಜನ BAMS ಓದಿದವರು ಅಲೋಪಥಿ ಚಿಕಿತ್ಸೆ ನೀಡುತ್ತಿದ್ದಾರೆ. ಒಟ್ಟಾರೆ 384 ಜನ ನಕಲಿ ವೈದ್ಯರ ಪಟ್ಟಿ ಕೈ ಸೇರಿದೆ. ರಬಕವಿ-ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ಪಟ್ಟಣದ ಕವಿತಾ ಎಂಬುವರು ಪಿಯುಸಿ ಓದಿದ್ದು ಗರ್ಭಪಾತ ದಂಧೆ ಮಾಡುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ.

ಜೂನ್ 18ರಂದು ಜಮಖಂಡಿಯಲ್ಲಿ ಸುರೇಖಾ ಚರಕಿ ಎಂಬ ನಕಲಿ ವೈದ್ಯೆ ಸಿಕ್ಕಿಬಿದ್ದಿದ್ದಾಳೆ. ಈಕೆಯ ಆಸ್ಪತ್ರೆಯಲ್ಲಿ ಗರ್ಭಪಾತ ದಂಧೆಗೆ ಬಳಸುವ ವಸ್ತುಗಳು ಸಿಕ್ಕಿವೆ. ಈಕೆ ಓದಿದ್ದು SSLC ಮಾತ್ರ. ಆದರೆ ಮಾಡುತ್ತಿದ್ದನ್ನು ವೈದ್ಯ ವೃತ್ತಿ. ಗರ್ಭಪಾತ ಮಹಿಳೆ ಸಾವಿನ ನಂತರ ನಕಲಿ ವೈದ್ಯರ ಬಣ್ಣ ಬಯಲಾಗುತ್ತಿದೆ. ಪೊಲೀಸರು ಕೊಟ್ಟ ವರದಿ ಪ್ರಕಾರ ಆರೋಗ್ಯ ಇಲಾಖೆ ನಕಲಿ ವೈದ್ಯರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕಿದೆ.

Leave a Reply

Your email address will not be published. Required fields are marked *

You missed

error: Content is protected !!