Spread the love

ಸಂಯುಕ್ತ ಟೈಮ್ಸ್, ಚಿಕ್ಕಮಗಳೂರು: ಮಧ್ಯ ವಯಸ್ಕರಿಗೂ ವೃದ್ಧಾಪ್ಯ ವೇತನ ಮಂಜೂರು ಮಾಡಿದ್ದ ಕಡೂರು ತಾಲ್ಲೂಕು ಕಚೇರಿ ಸಾಮಾಜಿಕ ಭದ್ರತೆ ವಿಭಾಗದ ಹಿಂದಿನ ಶಿರಸ್ತೇದಾರ್ ಆಗಿದ್ದ ಬಿ.ಸಿ.ಕಲ್ಮರುಡಪ್ಪ ಅವರನ್ನು ಸರ್ಕಾರ ಕರ್ತವ್ಯದಿಂದ ಅಮಾನತು ಮಾಡಿದೆ.

ಕಲ್ಮರುಡಪ್ಪ ಅವರು ಸದ್ಯ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಅಗರ ಹೋಬಳಿಯಲ್ಲಿ ಉಪತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು.

ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ದಾಪ್ಯ ವೇತನವನ್ನು 60 ವರ್ಷ ಮೇಲ್ಪಟ್ಟವರಿಗೆ ನೀಡಲಾಗುತ್ತಿದೆ. ಬಡತನ ರೇಖೆಗಿಂತ ಕೆಳಗಿನವರು ಮಾತ್ರ ಈ ಯೋಜನೆಗೆ ಅರ್ಹರು. ಆದರೆ, ಸಾಮಾಜಿಕ ಭದ್ರತಾ ವಿಭಾಗದ ಶಿರಸ್ತೇದಾರ್ (ಉಪತಹಶೀಲ್ದಾರ್) ಆಗಿದ್ದ ಬಿ.ಸಿ.ಕಲ್ಮರುಡಪ್ಪ ಅವರು ಲಾಗಿನ್ ದುರ್ಬಳಕೆ ಮಾಡಿಕೊಂಡು 35-40 ವಯಸ್ಸಿನವರಿಗೂ ವೇತನ ಮಂಜೂರು ಮಾಡಿದ್ದಾರೆ ಎಂಬ ದೂರುಗಳು ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿದ್ದವು.

ಇದನ್ನು ಆಧರಿಸಿ ತನಿಖೆ ನಡೆಸುವಂತೆ ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಅವರಿಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರು ಆದೇಶಿಸಿದ್ದರು. ಒಂದು ವರ್ಷದ ಅವಧಿಯಲ್ಲಿ ಶಿರಸ್ತೇದಾರ್ ಬಿ.ಸಿ.ಕಲ್ಮರುಡಪ್ಪ ಅವರ ಲಾಗಿನ್‌ನಲ್ಲಿ ಮಂಜೂರಾಗಿರುವ ವೃದ್ಧಾಪ್ಯ ವೇತನ ಪ್ರಕರಣಗಳ ಕುರಿತು ತನಿಖೆ ನಡೆಸಿರುವ ಕಾಂತರಾಜ್, ವರದಿ ಸಲ್ಲಿಸಿದ್ದರು. 1504 ಪ್ರಕರಣಗಳು ಅನಧಿಕೃತ ಎಂಬುದು ತನಿಖೆಯಲ್ಲಿ ಪತ್ತೆಯಾಗಿತ್ತು.

Leave a Reply

Your email address will not be published. Required fields are marked *

You missed

error: Content is protected !!