Spread the love

ಸಂಯುಕ್ತ ಟೈಮ್ಸ್, ಬೀದರ: ಧನ ಸಹಾಯ ಮಂಜೂರಾತಿಗಾಗಿ 500 ರೂಪಾಯಿ ಲಂಚ ಸ್ವೀಕರಿಸಿ ಲೋಕಾಯುಕ್ತ ಬಲೆಗೆ‌ ಬಿದ್ದಿದ್ದ ಬಸವಕಲ್ಯಾಣ ತಹಶೀಲ್ದಾರ ಕಚೇರಿಯ SDCಗೆ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ ಗುರುವಾರ ಶಿಕ್ಷೆ ಮತ್ತು‌ ದಂಡ ವಿಧಿಸಿದೆ.

ಜಯಶ್ರೀ ಬಸವರಾಜ ಶಿಕ್ಷೆಗೆ ಒಳಗಾದ SDC ಬಸವಕಲ್ಯಾಣ ತಾಲೂಕಿನ ಬೋಸಗಿ ಗ್ರಾಮದ‌ ಲಲಿತಾಬಾಯಿ ಪುರುಷೋತ್ತಮ ಎಂಬುವರಿಗೆ ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆಯಡಿ 10 ಸಾವಿರ ರೂಪಾಯಿ‌ ಧನ ಸಹಾಯ ಮಂಜೂರು ಮಾಡಿಸಿ ಚೆಕ್‌ ನೀಡಲು SDC ಜಯಶ್ರೀ ಬಸವರಾಜ ಲಂಚದ ಬೇಡಿಕೆ ಇಟ್ಟಿದ್ದರು. 2023ರ ಜ. 1 ರಂದು 500 ರೂ. ಲಂಚ ಸ್ವೀಕರಿಸುವಾಗ ಲೋಕಯುಕ್ತ ಪೋಲಿಸರ ಬಲೆಗೆ ಬಿದ್ದಿದ್ದರು.

ಅಂದಿನ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆರ್.ಎಸ್‌ ಜಾಗೀರದಾರ್ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು. ಪ್ರಕರಣದ‌ ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಧೀಶರಾದ ವಿಜಯಕುಮಾರ ಆನಂದಶೆಟ್ಟಿ ಜಯಶ್ರೀ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆ ಲಂಚ ನಿಷೇಧ ಕಾಯ್ದೆ ಕಲಂ 13 (2)ಕ್ಕೆ ಒಂದು ವರ್ಷ ಜೈಲು‌ ಶಿಕ್ಷೆ ಜತೆಗೆ 5 ಸಾವಿರ‌ ದಂಡ ಹಾಗೂ ಕಲಂ 7ರಡಿ 5 ಸಾವಿರ‌ ರೂ. ದಂಡ ವಿಧಿಸಲು ತಪ್ಪಿದರೆ ಒಂದು ತಿಂಗಳು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ವಿಶೇಷ ಸರ್ಕಾರಿ ಅಭಿಯೊಜಕ ಕೇಶವರಾವ್ ಶ್ರೀಮಾಳೆ‌ ಅವರು ಲೋಕಾಯುಕ್ತ ಪೊಲೀಸರ ಪರ ವಾದ ಮಂಡಿಸಿದ್ದರು.

Leave a Reply

Your email address will not be published. Required fields are marked *

You missed

error: Content is protected !!