Spread the love

ಸಂಯುಕ್ತ ಟೈಮ್ಸ್, ಬಾಗಲಕೋಟೆ: ಬಾಗಲಕೋಟೆಯ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್ ಬಳಿ ಮಣ್ಣು ಸಾಗಿಸುತ್ತಿದ್ದ ಟಿಪ್ಪರ್ ಪಲ್ಟಿಯಾಗಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ಬಾದದಿನ್ನಿ ಗ್ರಾಮದ ಯಂಕಪ್ಪ ತೋಳಮಟ್ಟಿ, ಆತನ ಪತ್ನಿ ಯಲ್ಲವ್ವ, ಮಗ ಪುಂಡಲೀಕ, ಮಗಳು ನಾಗವ್ವ ಹಾಗೂ ಗಂಡ ಅಶೋಕ ಬಮ್ಮಣ್ಣವರ ಎಂದು ಗುರುತಿಸಲಾಗಿದೆ.

ಮೃತರು ಹೊಲದ‌ ಕೆಲಸ ಮುಗಿಸಿ ಮನೆಗೆ ತೆರಳಲು ರಸ್ತೆ ಪಕ್ಕ ನಿಂತಿದ್ದಾಗ ಟೈರ್ ಬ್ಲಾಸ್ಟ್ ಆಗಿ ಟಿಪ್ಪರ್ ಲಾರಿ ಅವರ ಮೇಲೆ ಉರುಳಿ ಬಿದ್ದಿದ್ದು ಐವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಬೀಳಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

You missed

error: Content is protected !!