Spread the love

ಸಂಯುಕ್ತ ಟೈಮ್ಸ್, ಗೋಕಾಕ: ತಾಲೂಕಿನ ಘಟಪ್ರಭಾ ಪೊಲೀಸ ಠಾಣೆಯ PSI ಎಚ್.ಕೆ. ನರಳೆ ಹಾಗೂ ಸಿಬ್ಬಂದಿಗಳು ಖುದ್ದು ಫೀಲ್ಡಿಗಿಳಿದು ಸಾರ್ವಜನಿಕ ರಸ್ತೆಗಳಲ್ಲಿ ಕರ್ಶಕ ಧ್ವನಿವರ್ಧಕ ಸೌಂಡ್ ಹಾಕಿಕೊಂಡು ಸಂಚರಿಸಿ ಶಬ್ದಮಾಲಿನ್ಯವನ್ನು ಉಂಟುಮಾಡುತ್ತಿದ್ದ ಸೌಂಡ್ ಪ್ಲೇಯರನ್ನು ತೆರವುಗೊಳಿಸಿ ಟ್ರ್ಯಾಕ್ಟರ ಚಾಲಕರುಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಘಟಪ್ರಭಾ ಪೊಲೀಸ ಠಾಣೆಯ ವ್ಯಾಪ್ತಿಯ ಹಲವು ಗ್ರಾಮಗಳ ರಸ್ತೆಗಳಲ್ಲಿ ಪ್ರತಿ ನಿತ್ಯ ಹಗಲು ರಾತ್ರಿ ಎನ್ನದೇ ಟ್ರ್ಯಾಕ್ಟರ ಡ್ರೈವರಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ಟ್ರ್ಯಾಕ್ಟರಗಳಲ್ಲಿ ಕರ್ಶಕ ಧ್ವನಿವರ್ಧಕ ಸೌಂಡ್ ಹಾಕಿಕೊಂಡು ಸಂಚರಿಸುತ್ತಿದ್ದು ಶಬ್ದಮಾಲಿನ್ಯದಿಂದ ಸುತ್ತಮುತ್ತಲಿನ ನಿವಾಸಿಗಳಿಗೆ, ಸಾರ್ವಜನಿಕರಿಗೆ ಹಾಗೂ ಓದುವ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟಾಗಿ ತೊಂದರೆಯಾಗುತ್ತಿದೆ ಎಂದು ಹಲವಾರು ದೂರುಗಳು ಸಲ್ಲಿಕೆಯಾಗಿದ್ದವು.

ಸಾರ್ವಜನಿಕ ಸ್ಥಳಗಳಲ್ಲಿ ಟ್ರ್ಯಾಕ್ಟರಗಳ ಧ್ವನಿ ವರ್ಧಕಗಳ ಬಳಕೆಗೆ ಅನುಮತಿ ಇರುವುದಿಲ್ಲ ಹಾಗೂ ಹೆಚ್ಚಿನ ಶಬ್ಧವನ್ನು ಧ್ವನಿ ವರ್ಧಕಗಳು ಹೊರಸೂಸುತ್ತಿರುವುದರಿಂದ ಶಬ್ಧಮಾಲಿನ್ಯ ಆಗುವುದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ಈ ವಿಶೇಷ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

“ಘಟಪ್ರಭಾ ಪೊಲೀಸ ಠಾಣೆಯ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರಗಳಲ್ಲಿ ಕರ್ಶಕ ಧ್ವನಿವರ್ಧಕ ಸೌಂಡ್ ಹಾಕಿಕೊಂಡು ಸಾರ್ವಜನಿಕ ರಸ್ತೆಗಳಲ್ಲಿ ಸಂಚರಿಸಿದರೆ ಟ್ರ್ಯಾಕ್ಟರ ಚಾಲಕರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.”  H. D. ಮುಲ್ಲಾ ,  PI ಘಟಪ್ರಭಾ ಪೊಲೀಸ್ ಠಾಣೆ 

Leave a Reply

Your email address will not be published. Required fields are marked *

You missed

error: Content is protected !!