ಸಂಯುಕ್ತ ಟೈಮ್ಸ್, ಬೆಳಗಾವಿ: 12 ಸಾವಿರ ಲಂಚ ಸ್ವೀಕರಿಸುವಾಗ ಚಿಕ್ಕೋಡಿಯ ಪರಿಸರ ಅಧಿಕಾರಿ ಶೋಭಾ ಹೋಳ ಮತ್ತು ಪ್ರವೀಣ ದೊಡ್ಡಮನಿ ಡಾಟಾ ಎಂಟ್ರಿ ಆಪರೇಟರ ಶುಕ್ರವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಾಗವಾಡ ತಾಲೂಕಿನ ಕುಸನಾಳ ಗ್ರಾಮದ ಸಾಗರ ದೊಡ್ಡಮನಿ ಅವರು ಪೆಟ್ರೋಲ್ ಬಂಕನಲ್ಲಿ ರಿಟೇಲ್ ಓಟ್ಲೇಟ್ ಅಳವಡಿಸಲು NOC ನೀಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಚಿಕ್ಕೋಡಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು, ಪರಿಸರ ಅಧಿಕಾರಿ ಶೋಭಾ ಹೋಳ ಅವರು ಸಾಗರ ದೊಡ್ಡಮನಿ ಅವರಿಗೆ ಲಂಚ ನೀಡುವಂತೆ ಬೇಡಿಕೆಯಿಟ್ಟಿದ್ದರು.
ತದನಂತರ 13/06/2025 ರಂದು ಸಾಗರ ದೊಡ್ಡಮನಿ ಅವರು ಕರ್ನಾಟಕ ಲೋಕಾಯುಕ್ತ ಪೊಲೀಸ್ ಠಾಣೆ ಬೆಳಗಾವಿ ಇವರಿಗೆ ನೀಡಿದ ದೂರಿನ ಮೇರೆಗೆ ಕೊಡಲೇ ಕಾರ್ಯಪ್ರವೃತ್ತರಾದ ಬಿ. ಎಸ್ ಪಾಟೀಲ, DSP, ಕರ್ನಾಟಕ ಲೋಕಾಯುಕ್ತ ಬೆಳಗಾವಿ ಇವರು Case No: 12/2025 ಕಲಂ 7(A) ಲಂಚ ಪ್ರತಿಬಂಧಕ ಕಾಯ್ದೆ 1988 (ತಿದ್ದುಪಡಿ-2018) ರಡಿ ಪ್ರಕರಣ ದಾಖಲಿಸಿಕೊಂಡು, ದೂರುದಾರ ಸಾಗರ ದೊಡ್ಡಮನಿ ಅವರಿಂದ 12 ಸಾವಿರ ಲಂಚ ಸ್ವೀಕರಿಸುವ ವೇಳೆಯಲ್ಲಿ ಚಿಕ್ಕೋಡಿಯ ಪರಿಸರ ಅಧಿಕಾರಿ ಶೋಭಾ ಹೋಳ ಮತ್ತು ಡಾಟಾ ಎಂಟ್ರಿ ಆಪರೇಟರ ಪ್ರವೀಣ ದೊಡ್ಡಮನಿ ಅವರನ್ನು ಬಂಧಿಸಿದ್ದಾರೆ.
ಬೆಳಗಾವಿಯ ಲೋಕಾಯುಕ್ತ SP ಹನುಮಂತರಾಯ ರವರ ಮಾರ್ಗದರ್ಶನದಲ್ಲಿ ಅಧಿಕಾರಿಗಳಾದ ಬಿ. ಎಸ್ ಪಾಟೀಲ, DSP, ಅನ್ನಪೂರ್ಣ ಹುಲಗೂರ PI, ಸಂಗಮನಾಥ ಹೊಸಮನಿ PI ಹಾಗೂ ಸಿಬ್ಬಂದಿಗಳಾದ ಮಂಜು ಕಾನಪೇಠ, ರವಿ ಮಾವರಕರ, ರಾಜಶ್ರೀ ಬೊಸ್, ಗಿರೀಶ ಪಾಟೀಲ, ಲಗಮಣ್ಣ ಹೊಸಮನಿ, ಸಂತೋಷ ಬೇಡಗ, ಶಶಿ ದೇವರಮನಿ, ಅಮೋಲ ಕೊರವ, ಕೆ. ಎಸ್ ಕಾಜಗಾರ ಸೇರಿದಂತೆ ಹಲವಾರು ಲೋಕಾಯುಕ್ತ ಸಿಬ್ಬಂದಿಗಳು ಈ ದಾಳಿಯಲ್ಲಿ ಭಾಗವಹಿಸಿದ್ದರು.

